ನಮ್ಮ ಗುಣಮಟ್ಟ

ಅನನ್ಯ ಮಾರಾಟದ ಪ್ರತಿಪಾದನೆ

ars 550d features
ars quality bars

Qಗುಣಮಟ್ಟ ನಿಯಂತ್ರಣ

ಕಂಪನಿಯು ಯಾವಾಗಲೂ ತನ್ನ ಗ್ರಾಹಕರ ಅನುಭವವನ್ನು ವರ್ಧಿಸುವುದನ್ನು ಖಚಿತಪಡಿಸುತ್ತದೆ; ಆದ್ದರಿಂದ OES (ಆಪ್ಟಿಕಲ್ ಎಮಿಷನ್ ಸ್ಪೆಕ್ಟ್ರೋಮೆಟ್ರಿ) ಮತ್ತು ಉತ್ಪನ್ನಗಳ ಮ್ಯಾಕ್ರೋ ವಿಶ್ಲೇಷಣೆಗಾಗಿ ಲ್ಯಾಬ್ ಸೌಲಭ್ಯಗಳಂತಹ ಆಂತರಿಕ ಸೌಲಭ್ಯಗಳಿವೆ. ARS 550D TMT ಬಾರ್‌ಗಳ ಈ ವಿಶೇಷ ಗುಣಮಟ್ಟವನ್ನು ARS “550D Fe 550D” ಎಂದೂ ಸಹ ಹೆಸರಿಸಲಾಗಿದೆ. ಇಲ್ಲಿ, “Fe“ ಎಂದರೆ ಫೆರಸ್ ಅರ್ಥ ಕಬ್ಬಿಣವನ್ನು ಸೂಚಿಸುತ್ತದೆ, "550" ಎಂಬುದು ಕನಿಷ್ಠ ಉತ್ಪತ್ತಿಯಾಗುವ ಶಕ್ತಿಸಾಮರ್ಥ್ಯವನ್ನು ಸೂಚಿಸುತ್ತದೆ ಹಾಗೂ “D“ ಎಂಬುದು ನಮ್ಯತೆಯನ್ನು ಸೂಚಿಸುತ್ತದೆ. ಹೆಚ್ಚಿನ ನಮ್ಯತೆಯು ಆಘಾತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ವರ್ಧಿಸುತ್ತದೆ ಹಾಗೂ ARS 550D ಭೂಕಂಪ ಮತ್ತು 500 ಡಿಗ್ರಿ ಸೆಲ್ಸಿಯಸ್‍ವರೆಗಿನ ಅಗ್ನಿ ನಿರೋಧಕವಾಗಿಸುತ್ತದೆ. ಮೌಲ್ಯಗಳು, ಬದ್ಧತೆ ಮತ್ತು ತನ್ನ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ತಲುಪಿಸುವ ಒಂದು ಬಲವಾದ ಪ್ರಚೋದನೆಯಿಂದ ಚಾಲಿತವಾಗಿದ್ದು, BIS ನಿಂದ ಪಟ್ಟಿ ಮಾಡಲಾದ ಗುಣಮಟ್ಟ ನಿಯಂತ್ರಣ ವಿಶೇಷಣಗಳ ಎಲ್ಲೆಯನ್ನು ದಾಟುವುದಾಗಿ ARS 550D ಖಚಿತಪಡಿಸುತ್ತದೆ.

ARS ಉತ್ಪನ್ನದ ವೈಶಿಷ್ಟ್ಯಗಳು

  1. SERC ಪ್ರಮಾಣೀಕೃತ ಅಂತಿಮ ಬಳಕೆದಾರರಿಗೆ ಉಳಿತಾಯ ದೃಢೀಕರಿಸಿದೆ. (ಪ್ರತಿ ಟನ್‌ಗೆ ಅಂದಾಜು ರೂ. 4000/-) – ಒಂದು ಮುಂಚೂಣಿಯಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆ
  2. ಅನೇಕ ವರ್ಷಗಳಿಂದ D ಗುಣಮಟ್ಟದ ಪರಿಣತಿ. 100% “D” ಎಂದರೆ ಗುಣಮಟ್ಟ (ಅಂದರೆ. ಕಡಿಮೆ ಗಂಧಕ, ಕಡಿಮೆ ರಂಜಕ)
  3. ದಕ್ಷಿಣ ಭಾರತದಲ್ಲಿ ತನ್ನ ವಿಧದ TMT ವಿಭಾಗಕ್ಕೆ, ಪ್ರತಿಯೊಂದು ಸರಕುಗಳಿಗೆ, ಇಂಟರ್ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (SGS) ನಿಂದ ಘಟಕದ ಒಳಗಿನ ಮೂರನೇ ವ್ಯಕ್ತಿಯಿಂದ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತದೆ
  4. BIS ಪ್ರಮಾಣೀಕರಿಸಲಾಗಿದೆ
  5. ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ
  6. ಆಘಾತ ತಡೆದುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಗೊಳಿಸಲಾಗಿದೆ
  7. ಅತ್ಯಧಿಕ ನಮ್ಯತೆ
  8. ಗಗನಚುಂಬಿ ಕಟ್ಟಡಗಳು, ಜಲಾಶಯಗಳು, ಎಕ್ಸ್‌ಪ್ರೆಸ್‌ವೇಗಳು, ಸೇತುವೆಗಳು, ವಸತಿ ಸಂಕೀರ್ಣಗಳು ಇತ್ಯಾದಿ ನಿರ್ಮಾಣ ಕಾಮಗಾರಿಗಳಿಗೆ ಮತ್ತಷ್ಟು ಸದೃಢತೆ, ಸುರಕ್ಷತೆ ಮತ್ತು ಭದ್ರತೆಯ ಅಡಿಪಾಯವಾಗಿದೆ.

ಪ್ರಯೋಗಾಲಯ ಮತ್ತು ಪರೀಕ್ಷೆ

ars 550d tmt bars testing

ಬೆಂಡ್ & ರೀಬೆಂಡ್ ಪರೀಕ್ಷೆ

ಬೆಂಡ್ ಮತ್ತು ರೀಬೆಂಡ್ ಪರೀಕ್ಷೆಯು ಸ್ಟೀಲ್‌ನ ಗುಣಮಟ್ಟವನ್ನು ಪರೀಕ್ಷಿಸುವ ಒಂದು ಟೆಸ್ಟಿಂಗ್ ವಿಧಾನವಾಗಿದೆ. ಸ್ಟೀಲ್ ಬಾರ್‌ನಲ್ಲಿ ಯಾವುದಾದರೂ ಛಿದ್ರ ಮತ್ತು ಬಿರುಕುಗಳಿವೆಯೇ ಎಂದು ಪರಿಶೀಲಿಸಬಹುದು. ಈ ಪರೀಕ್ಷಾ ಫಲಿತಾಂಶಗಳನ್ನು ಸ್ಟೀಲ್ ಬಾರ್‌ಗಳಲ್ಲಿನ ಬಿರುಕು ಅಥವಾ ಛಿದ್ರವನ್ನು ಗುರುತಿಸಲೆಂದು ಒಂದು ಬೆಂಡ್/ರೀಬೆಂಡ್ ಪರೀಕ್ಷಾ ಪಟ್ಟಿಯಲ್ಲಿ ಯೋಜಿಸಲಾಗಿದೆ

ಮಾರ್ಟೆನ್‌ಸೈಟ್ ಮತ್ತು ರಿಂಗ್ ಪರೀಕ್ಷೆ

ಮಾರ್ಟೆನ್‌ಸೈಟ್ (ರಿಂಗ್) ಪರೀಕ್ಷೆಯು, ಪರೀಕ್ಷಾ ಸಂದರ್ಭದಲ್ಲಿ ರೂಪುಗೊಂಡ ರಿಂಗ್‌ಗಳನ್ನು ವಿಶ್ಲೇಷಿಸುವ ಮೂಲಕ ಸ್ಟೀಲ್ ಗಡಸುತನ, ನಮ್ಯತೆ ಮತ್ತು ಶಕ್ತಿಸಾಮರ್ಥ್ಯವನ್ನು ಪರೀಕ್ಷಿಸುವಂತಹ ಒಂದು ಗುಣಮಟ್ಟದ ನಿಯಂತ್ರಣ ಪರೀಕ್ಷೆಯಾಗಿದೆ.

ಕರ್ಷಕ ಪರೀಕ್ಷೆ /ಟೆನ್‌ಸೈಲ್ ಟೆಸ್ಟ್

ಸ್ಟೀಲ್‌ನ ಕರ್ಷಕ ಶಕ್ತಿಸಾಮರ್ಥ್ಯವನ್ನು ಪರೀಕ್ಷಿಸುವ ಕ್ರಿಯೆಯನ್ನು ಒಳಗೊಂಡ ಕರ್ಷಕ ಪರೀಕ್ಷೆಯನ್ನು ಯೂನಿವರ್ಸಲ್ ಟೆಸ್ಟಿಂಗ್ ಮೆಷಿನ್ (UTM) ನಲ್ಲಿ ಮಾಡಲಾಗುತ್ತದೆ, ಇದನ್ನು ಸಂಕುಚಿತ ಶಕ್ತಿ ಮತ್ತು ಸ್ಟೀಲ್‌ನ ಕರ್ಷಕ ಶಕ್ತಿಯನ್ನು ಪರೀಕ್ಷಿಸಲೆಂದು ಬಳಸಲಾಗುತ್ತದೆ.

ತಣ್ಣಗೆ ಮಾಡುವ ಪ್ರಕ್ರಿಯೆ

ತಣ್ಣಗೆ ಮಾಡುವುದು/ತಣಿಸುವುದು ಎಂದರೆ ನೀರು, ಎಣ್ಣೆ ಅಥವಾ ಗಾಳಿಯಲ್ಲಿ ಬಿಸಿಮಾಡಿದ ಲೋಹವನ್ನು ಕೆಲವು ವಸ್ತು ಗುಣಲಕ್ಷಣಗಳನ್ನು ಪಡೆಯಲು ತ್ವರಿತವಾಗಿ ತಂಪಾಗಿಸುವ ಪ್ರಕ್ರಿಯೆ. ಉಕ್ಕಿಗೆ, ಗಡಸುತನವನ್ನು ಈ ಪ್ರಕ್ರಿಯೆಯಿಂದ ಸಾಧಿಸಲಾಗುತ್ತದೆ.

ಬಿಲ್ಲೆಟ್ ತಯಾರಿಕೆ

ಹೊಸದಾಗಿ ತಯಾರಿಸಿದ ಸ್ಟೀಲ್ ಐಟಂ, ಆಯತದ ಅಥವಾ ಲೋಹದ ಪಟ್ಟಿಯ ರೂಪದಲ್ಲಿರುವುದನ್ನು ಸ್ಟೀಲ್ ಬಿಲ್ಲೆಟ್ ಎಂದು ಕರೆಯಲಾಗುತ್ತದೆ. ಬಿಲ್ಲೆಟ್‌ಗಳನ್ನು ನೇರವಾಗಿ ನಿರಂತರ ಕಾಸ್ಟಿಂಗ್ (ಎರಕಹೊಯ್ದ) ಅಥವಾ ಎಕ್ಸ್‌ಟ್ರೂಷನ್ (ನಿಸ್ಸರಣ ಕ್ರಿಯೆ) ಅಥವಾ ಪರೋಕ್ಷವಾಗಿ ಬಿಲ್ಲೆಟ್ ಮಿಲ್‌ಗಳಲ್ಲಿ ಬಿಸಿಯಾದ ರೋಲಿಂಗ್‌ನಿಂದ ಉತ್ಪಾದಿಸಲಾಗುತ್ತದೆ.

ಸ್ಪೆಕ್ಟ್ರೋ ವಿಶ್ಲೇಷಣೆ ಪರೀಕ್ಷೆ

ಸ್ಪೆಕ್ಟ್ರೋ ವಿಶ್ಲೇಷಣೆ ಪರೀಕ್ಷೆಯು ಒಳಬರುವ ಉತ್ಪನ್ನಗಳ ಪರಿಶೀಲನೆ, ಉತ್ಪಾದನೆ ಮತ್ತು ವಿತರಣೆಗೂ ಮೊದಲು ಸ್ಟೀಲ್ ನ ಗುಣಮಟ್ಟ ಗುರುತಿಸುವಿಕೆ, ವಿಂಗಡಿಸುವಿಕೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ.

SGS ಪ್ರಮಾಣಪತ್ರ

SGS ಪ್ರಮಾಣಪತ್ರ ಎಂಬುವುದು ತನಿಖಾಕಾರ್ಯ, ಪರಿಶೀಲನೆ, ಪರೀಕ್ಷಿಸುವುದು ಮತ್ತು ಪ್ರಮಾಣೀಕರಣ ಕಂಪನಿಗಳಿಂದ ಅನುಮೋದನೆಯಾಗಿದೆ. ಉತ್ಪನ್ನವು ಸರ್ಕಾರ ಮತ್ತು ಪ್ರಮಾಣೀಕರಣ ವಿಭಾಗಗಳು ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಈ ಅನುಮೋದನೆಯು ಖಚಿತಪಡಿಸುತ್ತದೆ.