ಕುರಿತು
ARS

ಗ್ರೂಪ್ ಅನ್ನು ಕುರಿತು

ARS ಎನರ್ಜಿ ಮತ್ತು ARS ಸ್ಟೀಲ್ ಅನ್ನು ಒಳಗೊಂಡಿರುವ ARS ಗ್ರೂಪ್ ಕಂಪನಿಯನ್ನು ARS ಮೆಟಲ್ಸ್ ಪ್ರೈ. ಲಿಮಿಟೆಡ್, 19 ಸೆಪ್ಟೆಂಬರ್ 1990 ರಂದು ಕಾನೂನುಬದ್ಧ ಸಂಸ್ಥೆಯಾಗಿ ರಚಿಸಲಾಯಿತು. ಜಾಗತಿಕ ಮಟ್ಟದಲ್ಲಿ ಒಂದು ಮಹಾನ್ ಶಕ್ತಿಯಾಗಿ ಉದಯವಾಗಬೇಕೆಂಬ ತನ್ನ ಗುರಿಯೊಂದಿಗೆ ಭಾರತಕ್ಕೆ ಮತ್ತು ದಕ್ಷಿಣ ಭಾರತಕ್ಕೆ ಅದರಲ್ಲೂ ವಿಶೇಷವಾಗಿ ತಮಿಳುನಾಡು ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ARS ಅನ್ನು ಸ್ಥಾಪಿಸಲಾಯಿತು. ಇದು ಇಂದು ನಮ್ಮ ದೇಶದಲ್ಲಿರುವ ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.

ಪ್ರಾರಂಭದಿಂದಲೂ, ಕಂಪನಿಯ ಪ್ರವರ್ತಕರು-ನಿರ್ದೇಶಕರು ಆದ ಶ್ರೀ ಅಶ್ವಾನಿ ಕುಮಾರ್ ಭಾಟಿಯಾ ಮತ್ತು ಶ್ರೀ ರಾಜೇಶ್ ಭಾಟಿಯಾ ರವರು ಎನರ್ಜ್ ಮತ್ತು ಸ್ಟೀಲ್ ಉದ್ಯಮವನ್ನು ಗ್ಯಾಲ್ವನೀಕರಿಸಿದ್ದಾರೆ. ವಿದೇಶಗಳವರೆಗೆ ವಿಸ್ತರಿಸಲೆಂದು ತಮ್ಮದೇ ಆದ ಅಪಾರ ಅನುಭವದ ಭಂಡಾರವನ್ನು ಬಳಸಿಕೊಂಡು ಕಂಪನಿಯನ್ನು ವ್ಯವಸ್ಥಿತ ಯೋಜನೆಯೊಂದಿಗೆ ನಿರ್ಮಿಸಿರುತ್ತಾರೆ.

ISO 9001 ಮತ್ತು 14001 ಪ್ರಮಾಣೀಕೃತ ಸ್ಟೀಲ್ ತಯಾರಕರಾದ ARS ಸ್ಟೀಲ್ ಕಂಪನಿಯು ದೇಶದ ಅತಿದೊಡ್ಡ ಇಂಡಕ್ಷನ್ ಫರ್ನೇಸ್ ಆಧಾರಿತ ಸ್ಟೀಲ್ ಮಿಲ್‌ಗಳಲ್ಲಿ ಒಂದಾಗಿದೆ.

2010 ರಲ್ಲಿ, ನಾವು ಹೊಸ 25-ಟನ್ ಫರ್ನೇಸ್ ಸ್ಥಾಪಿಸುವ ಮೂಲಕ ನಮ್ಮ ಬಿಲೆಟ್ ಉತ್ಪಾದನೆಯ ಮಟ್ಟವನ್ನು ವೃದ್ಧಿಗೊಳಿಸಿದ್ದೇವೆ. ಇದರಿಂದ ಫರ್ನೇಸ್ ಮತ್ತು ರೋಲಿಂಗ್ ಮಿಲ್‌ಗಳೆರಡೂ ಕೂಡ ಕ್ರಮವಾಗಿ 1,30,000 MTPA ಮತ್ತು 1,80,000 MTPA ವರೆಗೆ ಉತ್ಪಾದಿಸುವ ಸಾಮರ್ಥ್ಯವನ್ನು ಏರಿಸಿರುತ್ತವೆ.

ಮತ್ತೊಂದು 25 MT ಫರ್ನೇಸ್ ನಿರ್ಮಾಣ ಮಾಡುವ ಮೂಲಕ ನಮ್ಮ ಪ್ರಸಕ್ತ ಸ್ಟೀಲ್ ಕರಗುವ ಸೌಲಭ್ಯವನ್ನು ಇನ್ನಷ್ಟು ವಿಸ್ತರಣೆಗೊಳಿಸಬೇಕೆಂಬ ಯೋಜನೆಯನ್ನು ನಾವು ಹೊಂದಿದ್ದೇವೆ. ಆ ಮೂಲಕ ಬಿಲೆಟ್ ಉತ್ಪಾದನೆ ಮತ್ತು ರೋಲಿಂಗ್ ಮಿಲ್ 2,50,000 MTPA ಸಾಮರ್ಥ್ಯಗಳೆರಡರ ಉತ್ಪಾದನೆಯಲ್ಲಿ ಮಹತ್ವದ ಏರಿಕೆಯನ್ನು ಮಾಡಿರುತ್ತೇವೆ.

ARS vision

Vision

ARS aspires to lead the Steel & Power Industry through limitless innovation in technology creating new generation products and services, aims to set the new benchmarks of value-creation for all its Customers and Stakeholders, ARS intends to bring about boundless growth with trust.

Mission

  • To ignite ARS’ vision, keeping its values in the forefront
  • To pursue latest technology for excellence
  • To set new benchmarks in all spheres
  • To source, develop and retain best talents
  • To ensure ethical and high standard actions leadingto trust with all customers and stakeholders
ARS factory tmt bars in karnataka

ಧ್ಯೇಯ ಮತ್ತು ದೃಷ್ಟಿಕೋನ

ದೃಷ್ಟಿಕೋನ

ಸ್ಟೀಲ್ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ARS ಅಪೇಕ್ಷೆ ಪಡುತ್ತದೆ. ಹಾಗಾಗಿ ಅಪರಿಮಿತ ನಾವೀನ್ಯತೆಯ ಮೂಲಕ ಹೊಸ ಉದ್ಯಮದ ಮಾನದಂಡಗಳನ್ನು ಹಾಗೂ ಹೊಸ ತಲೆಮಾರಿನ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಸ್ಥಾಪಿಸುತ್ತದೆ.

ಧ್ಯೇಯ

ಹೊಸ ವ್ಯಾಪಾರೋದ್ಯಮದ ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಗತಗೊಳಿಸುವುದು. ಉತ್ಕೃಷ್ಟತೆ ಕಾಪಾಡಲು ಇತ್ತೀಚಿನ ತಂತ್ರಜ್ಞಾನವನ್ನು ಅನುಸರಿಸುವುದು. ಮೂಲವನ್ನು ಕಾಪಾಡಿಕೊಂಡು, ತಂತ್ರಜ್ಞಾನಗಳ ಅಭಿವೃದ್ಧಿಪಡಿಸುವುದು, ಅತ್ಯುತ್ತಮ ಮೂಲಗಳನ್ನು ಉಳಿಸಿಕೊಳ್ಳುವುದು. ನಮ್ಮ ಗ್ರಾಹಕರಿಗಾಗಿ ಒಂದು ಸ್ಪರ್ಧಾತ್ಮಕ ಬೆಲೆಯಲ್ಲಿ ಉನ್ನತ ಗುಣಮಟ್ಟದ ಸೇವೆಗಳನ್ನು ನಿರ್ವಹಿಸುವುದು. ದೀರ್ಘಕಾಲೀನ ಸಂಬಂಧಗಳನ್ನು ಭದ್ರವಾಗಿ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂಬ ನಿಟ್ಟಿನಲ್ಲಿ ನಮ್ಮ ಗ್ರಾಹಕರ, ಚಾನಲ್ ಪಾಲುದಾರರ ನಿರೀಕ್ಷೆಯನ್ನು ಪೂರೈಸುವುದಕ್ಕಾಗಿ ಮತ್ತು ಅವರ ನಿರೀಕ್ಷೆಗೂ ಮೀರಿ ಸೇವೆಸಲ್ಲಿಸಬೇಕೆಂಬ ಉದ್ದೇಶದಿಂದ ನಾವು ಅವಿರತ ಪ್ರಯತ್ನದಲ್ಲಿ ತೊಡಗಿದ್ದೇವೆ.

ars managing director
ಶ್ರೀ ಅಶ್ವನಿ ಕುಮಾರ್ ಭಾಟಿಯಾ
ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ

MD ರವರ ವಿಭಾಗ

ಗಾಢವಾದ ನಂಬಿಕೆ ಮತ್ತು ಕಾರ್ಯತಂತ್ರದ ದೃಷ್ಟಿಕೋನವನ್ನು ಇಟ್ಟುಕೊಂಡು ARS ಅನ್ನು ಸ್ಥಾಪಿಸಲಾಯಿತು. ಸಮರ್ಪಣಾ ಮನೋಭಾವದ ವೃತ್ತಿಪರರ ತಂಡದೊಂದಿಗೆ ಹಾಗೂ ದೂರದೃಷ್ಟಿಯುಳ್ಳ ನಾಯಕರ ಮುಂದಾಳತ್ವದೊಂದಿಗೆ, ಕಂಪನಿಯ ಒಂದೊಂದು ಇಟ್ಟಿಗೆಯ ನಿರ್ಮಾಣದಲ್ಲೂ ಅತ್ಯಧಿಕ ಸಂಖ್ಯೆಯ ನೌಕರರಿಂದ ಕೂಡಿದ ಮೀಸಲಾದ ಕಾರ್ಯಪಡೆಯ ಅವಿರತ ಪ್ರಯತ್ನವು ಅಡಕವಾಗಿದೆ. ಇಂದು, ARS ಬ್ರ್ಯಾಂಡ್ ಆನಂದಿಸುತ್ತಿರುವ ಖ್ಯಾತಿ ಮತ್ತು ಘನತೆಯೆಂಬುದು ಅನಿರ್ದಿಷ್ಟ ಕಾಲಾವಧಿಯವರೆಗೆ ಶ್ರಮಿಸಿದ ನಿಷ್ಠಾವಂತ ಗ್ರಾಹಕರ ಬೆಂಬಲದ ಮೇಲೆ ನಿರ್ಮಾಣಗೊಂಡಿದೆ. ನಮ್ಮ ಕಂಪನಿಯನ್ನು ಅನೇಕ ವರ್ಷಗಳ ಕಾಲದ ಶ್ರದ್ಧೆಯಿಂದ ಪೋಷಿಸಲಾಗಿರುತ್ತದೆ. ಹಲವು ವರ್ಷಗಳಿಂದಲೂ ARS ಕಂಪನಿಯು ತಮಿಳುನಾಡಿನಲ್ಲಿ ತನ್ನದೇ ಆದ ಒಂದು ಅಸಾಧಾರಣ ಉಪಸ್ಥಿತಿಯನ್ನು ಸ್ಥಾಪಿಸಿರುತ್ತದೆ. ಸ್ಟೀಲ್ ಮತ್ತು ವಿದ್ಯುಚ್ಛಕ್ತಿಯ ಒಬ್ಬ ಪ್ರೀಮಿಯಂ ಪೂರೈಕೆದಾರನಂತೆ ARS ಹೊರಹೊಮ್ಮಿದೆ.

ನಮ್ಮಲ್ಲಿರುವ ಸದ್ಯದ ಸಾಮರ್ಥ್ಯವನ್ನು ದ್ವಿಗುಣಗೊಳಿಸಲೆಂದು ನಮ್ಮ ಸ್ಟೀಲ್ ಉತ್ಪಾದನೆ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯನ್ನು ವೃದ್ಧಿಗೊಳಿಸಬೇಕೆಂಬ ವ್ಯವಸ್ಥಿತ ಯೋಜನೆಯನ್ನು ನಾವು ಹಾಕಿಕೊಳ್ಳುತ್ತಿದ್ದೇವೆ. ಕರ್ನಾಟಕ, ಕೇರಳ, ಮತ್ತು ಆಂಧ್ರಪ್ರದೇಶದಂತಹ ಅಕ್ಕಪಕ್ಕದಲ್ಲಿರುವ ಮಾರುಕಟ್ಟೆಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿರುವ ಸುಸಂದರ್ಭದಲ್ಲಿ, ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಏಷ್ಯಾ ದೇಶಗಳಲ್ಲಿ ವಿಶ್ವದಾದ್ಯಂತ ಲಭ್ಯವಿರುವ ಅವಕಾಶಗಳನ್ನು ತಲುಪಬೇಕೆಂಬ ಮಾರ್ಗಗಳನ್ನು ಅನ್ವೇಷಿಸುತ್ತಿದೆ.

ಯಾವುದೇ ಉದ್ಯಮದ ಬೆಳವಣಿಗೆ ಮತ್ತು ಉದ್ಯಮಶೀಲತಾ ಚಿಂತನೆಯ ಅಂಶಗಳು ಕೆಲವೊಂದು ಅಲ್ಪಾವಧಿಯ ಅಡೆತಡೆಗಳಿಗೆ ಕಾರಣವಾಗಬಹುದು. ಆದರೆ ARS ಕಂಪನಿಯ ಕುಟುಂಬದೊಳಗೆ ಇಂತಹ ಅಡೆತಡೆಗಳು ಮೊದಲಿನಿಂದಲೂ ಇದ್ದು, ಅವುಗಳನ್ನೆಲ್ಲಾ ನಿವಾರಿಸಿಕೊಂಡು ಮೆಟ್ಟಿನಿಲ್ಲುವ ಮೂಲಕ ಸುದೀರ್ಘಾವಧಿಯ ಬೆಳವಣಿಗೆಗೆ ಮತ್ತು ಪ್ರಗತಿಯ ಘಟ್ಟದಲ್ಲಿ ಉಳಿಯಲು ಕಾರಣವಾಗಿರುತ್ತದೆ

ನಮ್ಮ ಸಂಸ್ಥೆಯ ಸುಸ್ಥಿರ ಮತ್ತು ಲಾಭದಾಯಕ ಬೆಳವಣಿಗೆಗೆ ನಮ್ಮ ಸಹೋದ್ಯೋಗಿಗಳಿಂದ ಪ್ರತಿವರ್ಷ ತಮ್ಮ ಅಮೂಲ್ಯ ಪರಿಶ್ರಮಗಳಲ್ಲಿ ಒಡಮೂಡಿದ ಬದ್ಧತೆಯಿಂದಾಗಿ ಕನಸನ್ನು ನನಸಾಗಿಸಿ ಸಾಕಾರರೂಪಕ್ಕೆ ತಂದಿದ್ದಕ್ಕಾಗಿ ನಾನು ಅವರೆಲ್ಲರಿಗೂ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮೈಲಿಗಲ್ಲು

2019 ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 1,80,000 MT ಗೆ ವೃದ್ಧಿಗೊಳಿಸುವುದು

ars steel factory

ನಿರ್ದೇಶಕರ ಮಂಡಳಿ

ars steel MD
ಶ್ರೀ ಅಶ್ವಾನಿ ಕುಮಾರ್ ಭಾಟಿಯಾ
ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು

ಅರ್ಥಶಾಸ್ತ್ರ ಗೌರವ ಪದವೀಧರರಾದ ಶ್ರೀ ಅಶ್ವಾನಿ ಕುಮಾರ್ ಭಾಟಿಯಾ ರವರು ARS ಸ್ಟೀಲ್ಸ್ ಮತ್ತು ಅಲಾಯ್ ಇಂಟರ್ನ್ಯಾಷನಲ್ ಪ್ರೈ.ಲಿ ಮತ್ತು ARS ಎನರ್ಜಿ ಪ್ರೈ. ಲಿಮಿಟೆಡ್. ಕಂಪನಿಯ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆಗಿದ್ದಾರೆ. ಸ್ಟೀಲ್ಸ್ ಮತ್ತು ವ್ಯಾಪಾರ ಉದ್ಯಮದಲ್ಲಿ 39 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಶ್ರೀ ಅಶ್ವಾನಿ ರವರು ತಮ್ಮ ವೃತ್ತಿಜೀವನವನ್ನು 1978 ರಲ್ಲಿ ನವದೆಹಲಿಯ MS ಸ್ಕ್ರ್ಯಾಪ್ ವ್ಯಾಪಾರದೊಂದಿಗೆ ಪ್ರಾರಂಭಿಸಿದರು. ಅವರು ARS ಸ್ಟೀಲ್ಸ್ ಪ್ರೈ. ಲಿಮಿಟೆಡ್ ಕಂಪನಿಯನ್ನು 1990 ರಲ್ಲಿ ಪ್ರಾರಂಭಿಸಿದರು. ಆ ಸಮಯದಲ್ಲಿ MS ಇಂಗೋಟ್ಸ್ ತಯಾರಿಸುವ ದೃಷ್ಟಿಕೋನವು ಅವರಲ್ಲಿತ್ತು. ಕಂಪನಿಯ ಪ್ರಧಾನ ಪ್ರವರ್ತಕರಾಗಿದ್ದು, ಅವರು ಕಂಪನಿಯ ಕಾರ್ಯಾಚರಣೆಗಳ ಸಮಗ್ರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಶ್ರೀ ರಾಜೇಶ್ ಭಾಟಿಯಾರವರು ತಮ್ಮ ಬ್ಯಾಚುಲರ್‌ನ ಕೊನೆಯ ವರ್ಷದಲ್ಲಿ ಅರೆಕಾಲಿಕ ತರಬೇತುದಾರರಾಗಿ ARS ಸ್ಟೀಲ್ಸ್ ಕಂಪನಿಗೆ ಸೇರಿಕೊಂಡರು. ಈಗ ವ್ಯವಹಾರವನ್ನು ಒಂದು ಹೊಸ ಪಥಗಳಲ್ಲಿ ಕೊಂಡೊಯ್ಯುವ ಸಂಪೂರ್ಣ ಹೊಣೆಗಾರಿಕೆಯನ್ನು ಪಡೆದಿದ್ದಾರೆ. ಶ್ರೀ ರಾಜೇಶ್ ರವರು ನವದೆಹಲಿಯ BVIMR ನಲ್ಲಿ ವ್ಯವಹಾರ ಆಡಳಿತದಲ್ಲಿ ಪದವಿ ಪಡೆದರು ಹಾಗೂ BLB ಇನ್ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್‌ನಿಂದ ಸ್ಟಾಕ್ ಅನಾಲಿಸಿಸ್ ಮತ್ತು ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು. ಇವರು ಅಸ್ತಿತ್ವದಲ್ಲಿರುವ 1×60 MW ವಿದ್ಯುತ್ ಸ್ಥಾವರವನ್ನು ಯಶಸ್ವಿಯಾಗಿ ನಿಯೋಜಿಸಿಕೊಂಡು ಬರುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬರುತ್ತಿದ್ದಾರೆ. ಸದ್ಯಕ್ಕೆ ಅವರು ಮತ್ತೊಂದು 1×60 MW ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬೇಕೆಂಬ ಒಂದು ಸಾಹಸೋದ್ಯಮದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ars 550D managing director
ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ
ರಾಜೇಶ್ ಭಾಟಿಯಾ

ಮುಖ್ಯಭೂಮಿಕೆಯಲ್ಲಿರುವ ತಂಡ

ವೃತ್ತಿಪರ ನಿರ್ದೇಶಕರು

ಶ್ರೀ ಪ್ರೇಮದತ್ ಭಾಟಿಯಾರವರು ಭಾರತೀಯ ವಾಯುಪಡೆಯ ಮಾಜಿ ಸೈನಿಕರಾಗಿದ್ದಾರೆ. ಸ್ಟೀಲ್ ಸ್ಕ್ರ್ಯಾಪ್ ವ್ಯಾಪಾರದಲ್ಲಿ ಅವರಿಗೆ 30 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವಿದೆ. ಅವರು 1990 ರಲ್ಲಿ ARS ಗ್ರೂಪ್‍ಗೆ ನಿರ್ದೇಶಕರಾಗಿ ಸೇರಿದರು.

premdutt sir
ಶ್ರೀ ಪ್ರೇಮದತ್ ಭಾಟಿಯಾ
-

ಪೂರ್ಣ ಕಾಲಾವಧಿಯ ನಿರ್ದೇಶಕರು

technical director in plant
ಶ್ರೀ ಸಿ.ವಿ. ಸತ್ಯನಾರಾಯಣ ಮೂರ್ತಿ
ಸ್ಟೀಲ್ ಘಟಕದ ತಾಂತ್ರಿಕ ನಿರ್ದೇಶಕರು

ಸ್ಟೀಲ್ ಘಟಕದ ತಾಂತ್ರಿಕ ನಿರ್ದೇಶಕರಾದ ಶ್ರೀ ಸಿ.ವಿ. ಸತ್ಯನಾರಾಯಣ ಮೂರ್ತಿಯವರಿಗೆ ಸ್ಟೀಲ್ ಉದ್ಯಮದಲ್ಲಿ ಸುಮಾರು 28 ವರ್ಷಗಳ ಅಪಾರ ಅನುಭವವಿದೆ. ಅವರು 15 ವರ್ಷಗಳ ಕಾಲ ಬಾಲಾಜಿ ಗ್ರೂಪ್ ಆಫ್ ಕಂಪೆನೀಸ್ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಮತ್ತು ವಿಕಿ ಗ್ರೂಪ್ಸ್ ಆಫ್ ಕಂಪನೀಸ್ ನಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರೀಗ ARS ಸ್ಟೀಲ್ಸ್ ಅಂಡ್ ಅಲಾಯ್ ಇಂಟರ್‌ನ್ಯಾಷನಲ್ ಪ್ರೈ.ಲಿ. ಕಂಪನಿಯಲ್ಲಿ ಸ್ಟೀಲ್ ವಿಭಾಗದ ಉಸ್ತುವಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರು ಸುಮಾರು 2004 ರಿಂದಲೂ ARS GROUP ಕಂಪನಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದಾರೆ.

ಹಿರಿಯ ನಿರ್ವಹಣೆ

ಶ್ರೀ ಪ್ರಬು ರವರು ಹಣಕಾಸು ವಿಭಾಗದಲ್ಲಿ ಪರಿಣತಿ ಹೊಂದಿದ್ದು, ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ICWA (ಇಂಟರ್) ಅನ್ನೂ ಸಹ ಪೂರ್ಣಗೊಳಿಸಿದ್ದಾರೆ. ಕಳೆದ 25 ವರ್ಷಗಳಲ್ಲಿ, ಶ್ರೀ ಪ್ರಬು ರವರು ಲೋಹದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಶ್ರೀ ಪ್ರಬು ರವರು 1997 ರಲ್ಲಿ ARS ಗೆ ಸೇರಿಕೊಂಡರು. ಅನೇಕ ವರ್ಷಗಳಿಂದಲೂ, ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಇನ್ವೆಸ್ಟರ್ ರಿಲೇಶನ್ಸ್ ನಂತಹ ಕಾರ್ಯಗಳನ್ನು ಒಳಗೊಂಡಿರುವ ಗುಂಪಿನ ಮಟ್ಟದಲ್ಲಿ ಸಂಪೂರ್ಣ ಹಣಕಾಸಿನ ಕಾರ್ಯಗಳ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಇವರು ವಹಿಸಿಕೊಂಡಿದ್ದಾರೆ.

ಶ್ರೀ ಪ್ರಬು ರವರು ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದು, ಅವರು ಲೆಕ್ಕಪತ್ರ ನಿರ್ವಹಣೆ, ಹಣಕಾಸು ಯೋಜನೆ ಮತ್ತು ವಿಶ್ಲೇಷಣೆ, ಕಾರ್ಪೊರೇಟ್ ತೆರಿಗೆ, ಖಜಾನೆ, ಖರೀದಿಸುವ ಕಂಪನಿ ಚಟುವಟಿಕೆಗಳ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.

finance director
Mr. ಎನ್.ಪ್ರಭು
ಉಪನಿರ್ದೇಶಕರು (ಹಣಕಾಸು ಮತ್ತು ಖಾತೆಗಳು)

ಶ್ರೀ ರೆಡ್ಡಿ ಯವರು ARS ಸ್ಟೀಲ್ ಖರೀದಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಸುಮಾರು 28 ವರ್ಷಗಳ ಪರಿಣತಿಯನ್ನು ಹೊಂದಿದ್ದಾರೆ. ಅವರು ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಒಬ್ಬ ಅರ್ಹ ವಾಣಿಜ್ಯ ಪದವೀಧರನಾಗಿದ್ದಾರೆ.

ಶ್ರೀ ರೆಡ್ಡಿ ಯವರು 2004 ವರ್ಷದಿಂದಲೂ ARS ಗ್ರೂಪ್ ನೊಂದಿಗೆ ಉತ್ತಮವಾದ ಸಂಪರ್ಕ ಸೇತುವೆಯನ್ನು ಹೊಂದಿದ್ದಾರೆ. ಭಾರತದೊಳಗೆ ಮತ್ತು ಪ್ರಪಂಚದ ಅನೇಕ ದೇಶಗಳಿಂದ ಬರುವ ಕಚ್ಚಾ ವಸ್ತುಗಳನ್ನು ಮೂಲದಿಂದಲೇ ಪಡೆಯುವ ಬಗ್ಗೆ ಕಾಳಜಿ ವಹಿಸುತ್ತಾ ಬರುತ್ತಿದ್ದಾರೆ.

ಶ್ರೀ ರೆಡ್ಡಿ ಯವರು ಈ ಹಿಂದೆ ಬಾಲಾಜಿ ಗ್ರೂಪ್‌ ಕಂಪನಿಯ ಜೊತೆ 12 ವರ್ಷಗಳ ಕಾಲ ವ್ಯಾವಹಾರಿಕ ಸಂಬಂಧ ಹೊಂದಿದ್ದರು. ಅವರ ಪರಿಣತಿಯ ಕ್ಷೇತ್ರವೆಂದರೆ ಖರೀದಿ, ಸಂಪರ್ಕಸೇತು(ಲಿಯೇಸ್ನಿಂಗ್), ಸಪ್ಲೇ ಚೈನ್ ಮ್ಯಾನೇಜ್ಮೆಂಟ್, ಗುತ್ತಿಗೆ ನಿರ್ವಹಣೆ ಹಾಗೂ ಆಮದು ಮತ್ತು ರಫ್ತು ವಿಭಾಗಗಳು ಸೇರಿವೆ.

technical director
Mr. ಮೀರಾ ರೆಡ್ಡಿ
ಎಜಿಎಂ ಖರೀದಿ ವಿಭಾಗ
sekar sir
ಶ್ರೀ ಇ. ಸೇಕರ್ ಏಳುಮಲೈ
ವಿದ್ಯುತ್ ಸ್ಥಾವರ ಮುಖ್ಯಸ್ಥರು

ARS ಎನರ್ಜಿ ಪವರ್-ಪ್ಲಾಂಟ್‌ನ ಮುಖ್ಯಸ್ಥರಾದ ಶ್ರೀ ಇ.ಸೇಕರ್ ಏಳುಮಲೈರವರಿಗೆ ಇಂಧನ ಉದ್ಯಮದಲ್ಲಿ 31 ವರ್ಷಗಳ ಅಪಾರ ಅನುಭವವಿದೆ, ಹಾಗಾಗಿ, ಥರ್ಮಲ್ ಪವರ್ ಪ್ಲಾಂಟ್‌ಗಳ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಆಪರೇಷನ್ಸ್ ಮತ್ತು ನಿರ್ವಹಣೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2010 ರಿಂದ ARS ಗ್ರೂಪ್‌ನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಶ್ರೀ.ಸೇಕರ್ ಈಗ ARS ಎನರ್ಜಿಯ ಉಸ್ತುವಾರಿ ಅಧಿಕಾರಿಯಾಗಿದ್ದಾರೆ, ವರ್ಷಗಳಿಗೂ ಮೀರಿ ಇವರು ಸಂಪೂರ್ಣ ವಿದ್ಯುತ್ ಸ್ಥಾವರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನಿರ್ವಹಿಸುತ್ತಿದ್ದಾರೆ.

ಶ್ರೀಮತಿ ಎಸ್. ವಳರ್ಮಧಿ ತನ್ನ ಬಿ.ಕಾಂ, CA (ಇಂಟರ್), M.B.A (ಫೈನಾನ್ಸ್) ಮತ್ತು P.G.D.C.A ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದರು. ಅಕೌಂಟ್ಸ್ ಟ್ರಷರಿ ವಿಭಾಗದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದು, ಇದರಲ್ಲಿ KCP ಯನ್ನು 2+ ವರ್ಷಗಳ ಕಾಲ ವಿಯಟ್ನಾಂನಲ್ಲಿ ಮತ್ತು 3+ ವರ್ಷಗಳ ಕಾಲ INGO ನಲ್ಲಿ ಜರ್ಮನ್ ನ್ಯಾಷನಲ್ಸ್ ಜೊತೆ ಕಾರ್ಯನಿರ್ವಹಿಸಿದರು. ಅವರು 2014 ರಲ್ಲಿ ARS ಗೆ ಸೇರಿದರು. ಅಂದಿನಿಂದಲೂ ಹಲವು ವರ್ಷಗಳ ಕಾಲ ಅವರು ಎನರ್ಜಿ ಫೈನಾನ್ಸ್ ಮತ್ತು ಅಕೌಂಟ್ಸ್ ನಲ್ಲಿ ಪ್ರಮುಖ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ARS ಸ್ಟೀಲ್‌ನಲ್ಲಿ ಪ್ರಮುಖ ಹೆಚ್ಚುವರಿ ಜವಾಬ್ದಾರಿಗಳನ್ನೂ ಕೂಡ ನಿಭಾಯಿಸುತ್ತಿದ್ದಾರೆ.

general manager finance in ars steel
ಶ್ರೀಮತಿ ಎಸ್. ವಲಮದಿ
DMG ಹಣಕಾಸು ಮತ್ತು ಖಾತೆಗಳು